Hindi Translationक्या कहूँ, क्या कहूँ, एक के दो होना?
क्या कहूँ, क्या कहूँ, दो का एक होना?
क्या कहूँ, क्या कहूँ, उस अविरल घनत्व को?
महादानी कूडलसंगमदेव ही जानते हैं ।
Translated by: Banakara K Gowdappa
English Translation How shall I say, O how
One breaks up into two?
How shall I say, O how
Two join together in one?
How shall I speak, O how
Of the integral Absolute?
Lord Kūḍala Saṅgama, all bountiful
He alone knows!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationఏమం దేమందు నొక్కటి రెండౌట?
ఏమం దేమందు రెండు నొక్కటియౌట?
ఏమం దేమందు అవిరళ ఘనత!
మహాదాత సంగమదేవుడు తానే తెలియునయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಐಕ್ಯನ ಪ್ರಾಣಲಿಂಗಿಸ್ಥಲವಿಷಯ -
ಮುಕ್ತಿ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನನಿರಾಕಾರ ಪರಶಿವನಿಗೆ ಎರಡು ತೋಳು ಉದಿಸಿತು. ಅವನು ತನ್ನ ಒಂದು ತೋಳಿನಿಂದ ಈ ಲೋಕಕ್ಕೆ –ಒಂದು ದೊಡ್ಡಾಟವನ್ನು ತೋರಲೆಂದು –ಜೀವನನ್ನು ಇಳಿಯಬಿಟ್ಟ. ಇನ್ನೊಂದು ತೋಳಿನಿಂದ –ಆ ಜೀವನು ಮತ್ತೆ ತನ್ನಲ್ಲಿಗೆ ಏರಿಬರಲು ಆಧಾರವಾಗಲೆಂದು -ಭಕ್ತಿಯನ್ನು ಇಳಿಯಬಿಟ್ಟ.
ಹೃದಯದಿಂದ ಹೊರಟ ರಕ್ತ ಮೈಗೆಲ್ಲ ಕಸುವನ್ನು ತುಂಬಿಕೊಟ್ಟು ಮರಳಿ ಆ ಹೃದಯವನ್ನೇ ಸೇರುವಂತೆ -ಶಿವನ ಪ್ರಕೃತಿ(ಶಕ್ತಿ)ದ್ವಾರದಿಂದ ಹೊರಟು ವಿಶ್ವವಿಹಾರಿಯಾದ ಜೀವನು ವಿಶ್ವಕ್ಕೆಲ್ಲ ಒಂದು ಹೊಸ ಬದುಕಿನಂದವನ್ನು ಮನದಂದು ಭಕ್ತಿದ್ವಾರದಿಂದ ಮರಳಿ ಆ ಶಿವಹೃದಯಾರವಿಂದ ಮಕರಂದ ಬಿಂದುವಾಗಿ ವಿಶ್ರಮಿಸಿದ.
ಇಲ್ಲಿ ಶಿವನ ಸಂಕಲ್ಪದ ಸಜ್ಜನ್ನೂ ಅದನ್ನು ಬಳಸಿಕೊಂಡು ಜೀವನು ಮಾಡಿದ ಸಾಹಸವನ್ನೂ ಅರ್ಥ ಮಾಡಿಕೊಳ್ಳಬೇಕಾದರೆ –ಇಂದಿನ ವಿಜ್ಞಾನಿಗಳು ಒಬ್ಬ ವೀರನನ್ನು ಗ್ರಹಾಂತರಕ್ಕೆ ಕಳಿಸಿ -ಅವನನ್ನು ಮತ್ತೆ ಕ್ಷೇಮವಾಗಿ ಭೂಮಿಗೆ ಕರೆಸಿಕೊಂಡುದನ್ನು ನೆನೆಯಬಹುದು.
ಶಿವನು ಲಿಂಗವೆಂದು ಅಂಗವೆಂದು ಎರಡಾಗಿ –ಅಂದರೆ ಈ ಪ್ರಪಂಚವೆಂದು ಜೀವವೆಂದು ಎರಡಾಗಿ –ಅಲ್ಲಿ ತನ್ನೊಂದು ಅಂಶವಾದ ಜೀವನು ಏನೆಲ್ಲ ಅದ್ಭುತಗಳನ್ನು ಎಸಗಬಲ್ಲನೆಂಬುದನ್ನು ಎಲ್ಲರಿಗೂ ವ್ಯಕ್ತಪಡಿಸುತ್ತ–ಆ ಮೂಲಕವೆ ಆ ಜೀವದ ಘನತೆಯನ್ನೂ, ಒಡೆಯನಾದ ತನ್ನ ಅವಿರಳ ಘನತೆಯನ್ನೂ ಪ್ರಕಟಿಸುವುದೇ ಆ ಶಿವನ ಅರ್ಥಪೂರ್ಣವಾದೊಂದು ಲೀಲೆಯಾಗಿದೆ.
ಶಿವ+ಶಕ್ತಿ
ಲಿಂಗ ಅಂಗ
1 2 3 4
ಭಾವಲಿಂಗ + ಪ್ರಕಾಶನ ಶಕ್ತಿ ಯೋಗಾಂಗ + ವಿಶುದ್ಧಭಕ್ತಿ
ಪ್ರಾಣಲಿಂಗ + ವಿಮರ್ಶನ ಶಕ್ತಿ ಭೋಗಾಂಗ + ವಿಚಾರಭಕ್ತಿ
ಇಷ್ಟಲಿಂಗ + ಆಭಾಸನ ಶಕ್ತಿ ಭಕ್ತಾಂಗ + ಆಚಾರ ಭಕ್ತಿ
1. ಭಾವಲಿಂಗ: ಮಹಾಲಿಂಗ,ಪ್ರಸಾದಲಿಂಗ
ಪ್ರಾಣಲಿಂಗ: ಜಂಗಮಲಿಂಗ,ಶಿವಲಿಂಗ
ಇಷ್ಟಲಿಂಗ: ಗುರುಲಿಂಗ, ಆಚಾರಲಿಂಗ
2. ಪ್ರಕಾಶನ ಶಕ್ತಿ: ಚಿತ್ಶಕ್ತಿ, ಪರಾಶಕ್ತಿ
ವಿಮರ್ಶನ ಶಕ್ತಿ: ಆದಿಶಕ್ತಿ,ಇಚ್ಛಾಶಕ್ತಿ
ಆಭಾಸನ ಶಕ್ತಿ: ಜ್ಞಾನಶಕ್ತಿ,ಕ್ರಿಯಾಶಕ್ತಿ
3. ಯೋಗಾಂಗ: ಐಕ್ಯ,ಶರಣ
ಭೋಗಾಂಗ: ಪ್ರಾಣಲಿಂಗ,ಪ್ರಸಾದಿ
ತ್ಯಾಗಾಂಗ:ಮಾಹೇಶ್ವರ,ಭಕ್ತ
4. ವಿಶುದ್ಧಭಕ್ತಿ : ಆನಂದಭಕ್ತಿ, ಸಮರಸಭಕ್ತಿ
ವಿಚಾರಭಕ್ತಿ: ಅವಧಾನಭಕ್ತಿ, ಅನುಭಾವಭಕ್ತಿ
ಆಚಾರಭಕ್ತಿ: ಶ್ರದ್ಧಾಭಕ್ತಿ,ನಿಷ್ಠಾಭಕ್ತಿ
ವಿ : ಲೀಲೆಗಾಗಿ ಶಿವನು ಲಿಂಗವೆಂದು ಅಂಗವೆಂದು ಎರಡಾದಾಗ ಶಿವನ ಶಕ್ತಿಯೂ ಆ ಲಿಂಗದ ಜೊತೆಯಲ್ಲೇ ಚಿದಾದಿಶಕ್ತಿಯಾಗಿ ಈ ಪ್ರಪಂಚೋತ್ಪತ್ತಿಗೆ ಕಾರಣವಾಗುವಳು. ಈ ಶಕ್ತಿಯೇ ಅಂಗ(ಜೀವ)ವನ್ನು ಪ್ರಪಂಚದಿಂದ ಉದ್ಧರಿಸಿ ಮರಳಿ ಲಿಂಗದಲ್ಲಿ ಸಮರಸಗೊಳಿಸಲು ಶ್ರದ್ಧಾದಿಭಕ್ತಿಯಾಗಿ ಆ ಜೀವನ ಜೊತೆಗೂಡುವಳು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.