ಬಸವಣ್ಣ   
Index   ವಚನ - 1020    Search  
 
ಅರಿವುವಿಡಿದು, ಅರಿವನರಿದು, ಅರಿವೇ ನೀವೆಂಬ ಭ್ರಾಂತು ಎನಗಿಲ್ಲವಯ್ಯಾ, ಮರಹುವಿಡಿದು, ಮರಹ ಮರೆದು, ಮರಹು ನೀವೆಂಬ ಮರಹಿನವ ನಾನಲ್ಲವಯ್ಯಾ. ದೇಹ ಪ್ರಾಣಂಗಳ ಹಿಂಗಿ,ದೇಹವಿಡಿದು, ದೇಹ ನಿಮ್ಮದೆಂಬ ಭ್ರಾಂತುಸೋಕಿ ನಾನಲ್ಲವಯ್ಯಾ. ನಿಮ್ಮ ಅರಿದ ಅರಿವ ಭಿನ್ನವಿಟ್ಟ ಕಂಡೆನಾದಡೆ ನಿಮ್ಮಾಣೆ ಕಾಣಾ, ಕೂಡಲಸಂಗಮದೇವಾ.