ಬಸವಣ್ಣ   
Index   ವಚನ - 1274    Search  
 
ಬಟ್ಟಬಯಲಲ್ಲಿ ಒಂದು ತಲೆಯಿಲ್ಲದ ಆನೆಯಿದ್ದಿತ್ತು, ಆನೆ ಬಂದು ಆನೆಯ ನುಂಗಿ ತಾನೆ ಅಳಿಯಿತ್ತು, ಅಂತರವಿಲ್ಲದ ಒಳಗು, ಅವಲಂಬನವಿಲ್ಲದ ಹೊರಗು ನೋಡಾ. ದಳವಿಲ್ಲದ ಕುಸುಮದ ಗದ್ದುಗೆಯಲ್ಲಿ ಒಡಲಿಲ್ಲದ ಘನವು ಮೂರ್ತಿಗೊಂಡು, ವಿಚಿತ್ರವಾಯಿತ್ತು ಜಗವೆಲ್ಲ. ಕೂಡಲಸಂಗಮದೇವರ ಶರಣ ಪ್ರಭುದೇವರ ಶ್ರೀಪಾದಕ್ಕೆ ಆನು ನಮೋ ನಮೋ ಎಂಬೆನು.