ಬಸವಣ್ಣ   
Index   ವಚನ - 1397    Search  
 
ಹಸ್ತ ಕಡಗ ಕೈಗಧಿಕ ನೋಡಾ; ಕೊಡಲಹುದು ಕೊಳ್ಳಲಹುದು. ಬಾಹುಬಳೆ ತೋಳಿಂದಧಿಕ ನೋಡಾ: ಪರವಧುವನಪ್ಪಲಾಗದು. ಕರ್ಣಕ್ಕೆ ರುದ್ರಾಕ್ಷಿ ಅಧಿಕ, ನೋಡಾ: ಶಿವನಿಂದೆಯ ಕೇಳಲಾಗದು. ಕಂಠಮಾಲೆ ಕೊರಳಿಂದಧಿಕ, ನೋಡಾ: ಅನ್ಯದೈವಕ್ಕೆ ತಲೆಬಾಗಲಾಗದು. ಆವಾಗಳೂ ನಿಮ್ಮುವನೆ ನೆನೆದು, ನಿಮ್ಮುವನೇ ಪೂಜಿಸಿ ಕೂಡಲ ಸಂಗಯ್ಯನ ಪದಸನ್ನಿಹಿತನಾಗಿಪ್ಪಡೆ ಅಂಗ ಶಿಖಾಮಣಿಯಯ್ಯಾ!