ಗುರುಕಾರುಣ್ಯವ ಪಡೆದು ಲಿಂಗದೊಳವಗ್ರಾಹಕನಾಗದೆ,
ಅಂಗಲಿಂಗ, ಪ್ರಾಣಲಿಂಗ, ಆತ್ಮಲಿಂಗಸಂಬಂಧದ ವಿಚಾರವಿಲ್ಲದೆ
ಬರಿಯ ಜ್ಞಾನಯೋಗವೆಂಬ ಶೂನ್ಯದನುಭಾವಿಗೆ ಗುರು ಭಕ್ತಿ ಇಲ್ಲ,
ಗುರು ಭಕ್ತಿ ಇಲ್ಲವಾಗಿ ಲಿಂಗ ಭಕ್ತಿ ಇಲ್ಲ,
ಲಿಂಗ ಭಕ್ತಿಯಿಲ್ಲವಾಗಿ ಜಂಗಮ ಭಕ್ತಿ ಇಲ್ಲ,
ಜಂಗಮ ಭಕ್ತಿ ಇಲ್ಲವಾಗಿ ಪ್ರಸಾದವಿಲ್ಲ,
ಪ್ರಸಾದ ಪ್ರಸನ್ನವಿಲ್ಲವಾಗಿ ಮೋಕ್ಷವಿಲ್ಲ. ಇದು ಕಾರಣ,
ಸದ್ಗುರು ಸಿದ್ಧಸೋಮನಾಥನಲ್ಲಿ ಗುರುಕರಜಾತರಾದ
ಲಿಂಗಾಂಗಸಂಬಂಧಿಗಳಪೂರ್ವವಯ್ಯಾ ಪ್ರಭುವೆ.