ಹುಡಿ ಹತ್ತದ ಗಾಳಿಯಂತೆ,
ಕಾಡಿಗೆ ಹತ್ತದಾಲಿಯಂತೆ,
ನೆಯ್ ಹತ್ತದ ನಾಲಗೆಯಂತೆ,
ಮಂಗಳ ಮಣ್ಣ ಬೆರಸದಂತೆ,
ಸಿದ್ಧಸೋಮನಾಥಾ,
ನಿಮ್ಮ ಶರಣನು ಸಕಲಸುಖಂಗಳ
ಸುಖಿಸಿಯೂ ಬೇರಿಪ್ಪನು.
Art
Manuscript
Music
Courtesy:
Transliteration
Huḍi hattada gāḷiyante,
kāḍige hattadāliyante,
ney hattada nālageyante,
maṅgaḷa maṇṇa berasadante,
sid'dhasōmanāthā,
nim'ma śaraṇanu sakalasukhaṅgaḷa
sukhisiyū bērippanu.