Index   ವಚನ - 16    Search  
 
ಎಲ್ಲಾ ಜಗಂಗಳೊಳಗಿರ್ದಡೇನು ಶಿವನು ಜಗದಂತಹನಲ್ಲ. ಜಗವ ತನ್ನೊಳಗಿಕ್ಕಿ ತಾ ಹೊರಗಿರ್ದಹೆನೆಂದಡೆ ಬ್ರಹ್ಮಾಂಡದಂತಹನೇ ? ಅಲ್ಲ. ಆಕಾಶದೋಪಾದಿಯಲ್ಲಿ ಸರ್ವಲೋಕದ ಒಳ ಹೊರಗೆ ಮೂಲ ಚೈತನ್ಯ ತಾನಾಗಿ, ಆಧಾರವಾದ ನಮ್ಮ ರೇಕಣ್ಣಪ್ರಿಯ ನಾಗಿನಾಥಾ.