Index   ವಚನ - 23    Search  
 
ಕುಲವ ಕೂಡದೆ ಕೋಪವಡಗಿ ಅನ್ಯಹೇಸಿಕೆ ಮತ್ತೆ ಐಕ್ಯವಾದ ನಿರುತ ಭರಿತದ ಪರಮಸುಖ ಎನಗೆಂದಪ್ಪುದೊ? ಕಾಯದಂದುಗ ಬಿಟ್ಟು ನಿರಾಸೆಯಲ್ಲಿ ನೆರೆ ಸಲು[ಹಿ]ಂದ ಎನ್ನ ನಚ್ಚಿನ ಲಿಂಗ ಮೆಚ್ಚಿನ ಘನಕ್ಕೆ ಘನಲಿಂಗವಾಗಿ ರೇಕಣ್ಣಪ್ರಿಯ ನಾಗಿನಾಥನ ಸವಿಯೊಲವೆನಗಪ್ಪುದೆಂದೋ ?