Index   ವಚನ - 42    Search  
 
ಬಾಯೊಳಗಿದ್ದ ರುಚಿಯನುಗುಳಿ ನುಂಗಲೇಕೇ ? ಕಣ್ಣಿನೊಳಗಿದ್ದ ರೂಪನಗಲಿ ನೋಡಲುಂಟೆ ? ಕೈಯೊಳಗಿದ್ದ ವಸ್ತುವ ಬಿಟ್ಟು ಹಿಡಿಯಲುಂಟೆ ? ತನ್ನೊಳಗಿದ್ದ ಘನವ ಭಿನ್ನವಿಟ್ಟರಸುವಡೆ. ರೇಕಣ್ಣಪ್ರಿಯ ನಾಗಿನಾಥಾ ಬಸವಣ್ಣನಿಂದ ಬುದುಕಿತೀ ಲೋಕವೆಲ್ಲ.