Index   ವಚನ - 48    Search  
 
ಮಾನವಲೋಕದವರೆಲ್ಲರೂ ಮರದಲಿಂಗವ ಪೂಜಿಸುವರಯ್ಯಾ. ಮರನ ಸಿಂಹಾಸನದ ಮೇಲೆ ಗಂಗೆವಾಳುಕಸಮಾರುದ್ರರೆಲ್ಲರೂ ಹಿಂದಣ ಋಷಿಗಳು ದೇವತ್ವಗುಣವನರಿಯರಾಗಿ ಅಂಗವಿಲ್ಲವರಿಗೆ. ವರಮುಖ ಶಾಪಮುಖರಾಗಿ ಲಿಂಗವಿಲ್ಲವರಿಗೆ. ಧ್ಯಾನದಿಂದ ಲಿಂಗವ ಕಂಡೆನೆಂದೆಂಬರು. ಮೌನದಿಂದ ಲಿಂಗವ ಕಂಡೆನೆಂದೆಂಬರು. ಅನುಷ್ಠಾನದಿಂದ ಲಿಂಗವ ಕಂಡೆನೆಂದೆಂಬರು. ಜಪ ತಪ ಸಮಾಧಿ ಸಂಧ್ಯಾ ನಿತ್ಯನೇಮ ಹೋಮ ಇವೆಲ್ಲವ ಮಾಡಿದವರೆಲ್ಲರೂ ಕೆಯ್ಯ ಬೆಳೆದ ಒಕ್ಕಲಿಗನಂತೆ ಫಲದಾಯಕರಾದರಯ್ಯ. ಇವೆಲ್ಲವನೂ ಅಲ್ಲವೆಂಬೆ, ಸೋಹಂ ಎಂಬೆ. [ಮೆಲ್ಲ] ಮೆಲ್ಲನೆ ಆಡುವೆ ಬಹುರೂಪ. ಇವೆಲ್ಲ ನಾಸ್ತಿಯಾದವು, ಎನ್ನ ಬಹುರೂಪಮುಖದಲ್ಲಿ. ರೇಕಣ್ಣಪ್ರಿಯ ನಾಗಿನಾಥಾ, ಬಸವನಿಂದ ಬದುಕಿತೀ ಲೋಕವೆಲ್ಲ.