Index   ವಚನ - 51    Search  
 
ಲಿಂಗನಿಷ್ಠೆಯಿಲ್ಲದವರಂಗಳವ ಮೆಟ್ಟಲಾಗದು. ಜಂಗಮಪ್ರೇಮವಿಲ್ಲದವರೊಡನೆ ಮಾತನಾಡಲಾಗದು. ಪ್ರಸಾದವ ಪಡೆಯದವರ ಸಮಪಙ್ತಿಯಲ್ಲಿ ಕುಳಿತು ಪ್ರಸಾದ ಭೋಗವ ಮಾಡಲಾಗದು. ಇಂತೀ ಲಿಂಗ ಜಂಗಮ ಪ್ರಸಾದ ವಿಶ್ವಾಸವಿಲ್ಲದವರಿಗೆ ನರಕ ತಪ್ಪದು. ಅಂಥವರ ಸಂಗವ ಸತ್ಯಸಜ್ಜನರು ಮಾಡಲಾಗದು. ಅದೇನು ಕಾರಣವೆಂದಡೆ: ಪ್ರಾಣಲಿಂಗ ಶಿಲಾಭೇದಂ ಚರಲಿಂಗಂತು ಯೋ ನರಃ| ಪ್ರಸಾದಂ ದ್ರವ್ಯ ಭಾವೇನ ರೌರವ ನರಕಂ ವ್ರಜೇತ್|| ಎಂದುದಾಗಿ, ಇಂತೀ ಲಿಂಗ ಜಂಗಮ ಪ್ರಸಾದ ಸದ್ಭಾವ ನಂಬುಗೆಯ ಭಕ್ತಿ ಬೆಸುಗೆಯಿಲ್ಲದವರ ಎನಗೆ ತೋರದಿರಯ್ಯ ರೇಕಣ್ಣಪ್ರಿಯ ನಾಗಿನಾಥಾ