Index   ವಚನ - 52    Search  
 
ಲಿಂಗ ಲಿಂಗೈಕ್ಯನೆಂಬ, ಶಬುದಲಿಂಗೈಕ್ಯಂಗೆ ಭಕ್ತಿಯೆಂತೊ? ಕಿರಿದಿರಲಿ ಅರಿವು ಕರಘಟಿಸಿ ಘನತೆಗೆ ತೆರಹು ಮರಹು ಕುರುಹು ಕೂಡದ ಬೆರಗು ತೋರದೆ? ಕೈಮಾಟ ಮಾಟದ ಕೂಟ ನಿಂದಲ್ಲಿ ತಂದಿಂಕೆಡೆಯಾಗಲೊಲ್ಲದೆ ಕುಳ್ಳಿದ್ದಾತ ಭೂತಲಿಂಗೈಕ್ಯ[ನು], ಕಾಯದಲ್ಲಿ ಲಿಂಗೈಕ್ಯನು, ಜೀವದಲ್ಲಿ ಲಿಂಗೈಕ್ಯನು. ಕಾಯ ಜೀವದ ಸಂದಳಿದ ಲಿಂಗಪ್ರಾಣಿಯು ಒಂಬತ್ತನೆಯ ಉತ್ತಮಾಂಗವಲ್ಲದೆ ಹತ್ತನೆಯ ಉತ್ತಮಾಂಗದಲ್ಲಿ ಬೆಳಗಾದ ಬಾಗಿಲನರಿದಾತನೆ ಜೀವಲಿಂಗೈಕ್ಯ. ಕಾರಮೇಘವು ನೀರಲ್ಲಿ ಬೆರಸಿ ಹರಿದುಹೋದ ಪರಿಯಂತೆ ಸಾರಿದ ಶರಣ ಲಿಂಗಸಂಗಿಯಾಗಿರ್ದ. ವಾಯುಮೇಘವು ನೀರು ಬೆರಸಿ ನಿರಾಳವಾಯಿತ್ತ ಕಂಡೆ. ರೇಕಣ್ಣಪ್ರಿಯ ನಾಗಿನಾಥಾ ಶರಣನುಪಮೆಯಿಲ್ಲ.