ಹಿರಿಯರೆಂತಿರ್ಪರಯ್ಯಾ?
ಅಯ್ಯಾ, ದಿಟದ ರಾಸಿಗೆ ಅವರ ಘಟ ಲಕ್ಷಣ.
ನಿಸ್ಸೀಮರೆಂತಿರ್ಪರಯ್ಯಾ?
ಅಯ್ಯಾ, ಸೀಮೆಗೆಡೆಗುಡದ ಬಯಲನೊಳಕೊಂಡಿರ್ಪರು.
ಭಾವರೆಂತಿರ್ಪರಯ್ಯಾ?
ಅಯ್ಯಾ, ಕಣ್ಣಾಲಿ ದೃಷ್ಟಿಯ ನುಂಗಿದಂತೆ.
ನೀರೆಂತು ನೆನೆವುದೆಂದು ಬೆಸಗೊಂಡಡೆ
ಹೇಳುವ ಶಬ್ದದಂತಿಹುದದರ ನಿಲುವು.
ಲಿಂಗ ಮಧ್ಯೇ ಜಗತ್ಸರ್ವಂ ಲಿಂಗದಂಗ
ರೇಕಣ್ಣಪ್ರಿಯ ನಾಗಿನಾಥನಂತಿರ್ಪರು.
Art
Manuscript
Music
Courtesy:
Transliteration
Hiriyarentirparayyā?
Ayyā, diṭada rāsige avara ghaṭa lakṣaṇa.
Nis'sīmarentirparayyā?
Ayyā, sīmegeḍeguḍada bayalanoḷakoṇḍirparu.
Bhāvarentirparayyā?
Ayyā, kaṇṇāli dr̥ṣṭiya nuṅgidante.
Nīrentu nenevudendu besagoṇḍaḍe
hēḷuva śabdadantihudadara niluvu.
Liṅga madhyē jagatsarvaṁ liṅgadaṅga
rēkaṇṇapriya nāgināthanantirparu.