Index   ವಚನ - 107    Search  
 
ಅಂಥ ಬ್ರಹ್ಮಾಂಡವ ಆರುಲಕ್ಷದ ಮೇಲೆ ಸಾವಿರದ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕೈದಾರವೆಂಬ ಭುವನ. ಆ ಭುವನದೊಳು ಕಲಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರಿಪ್ಪತ್ತೈದುಕೋಟಿ ದೇವರ್ಕಳು ಮುನೀಂದ್ರರು ವೇದಪುರುಷರು ಚಂದ್ರಾದಿತ್ಯರು ಇಂದ್ರಾದಿಗಳಿಹರು ನೋಡಾ. ಐನೂರಿಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.