Index   ವಚನ - 110    Search  
 
ಅಂಥ ಬ್ರಹ್ಮಾಂಡವ ಒಂಬತ್ತುಲಕ್ಷದ ಮೇಲೆ ಸಾವಿರದ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಹೇಂದ್ರಕೇಶ್ವರವೆಂಬ ಭುವನ. ಆ ಭುವನದೊಳು ಮಹಾಂತಾಕಾಶನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರಾನಲವತ್ತುಕೋಟಿ ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು ನೋಡಾ. ಐನೂರಾನಲವತ್ತುಕೋಟಿ ಇಂದ್ರ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.