ಅಂಥ ಬ್ರಹ್ಮಾಂಡವ ಹದಿನಾಲ್ಕುಲಕ್ಷದ ಮೇಲೆ
ಸಾವಿರದನೂರಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮುಂಡಿಯೆಂಬ ಭುವನ.
ಆ ಭುವನದೊಳು ರುಂಡಮಾಲಾಧರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರರವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಐನೂರರವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava hadinālkulakṣada mēle
sāviradanūramūvatteṇṭu
brahmāṇḍavanoḷakoṇḍudondu muṇḍiyemba bhuvana.
Ā bhuvanadoḷu ruṇḍamālādharanemba rudramūrti ihanu.
Ā rudramūrtiya ōlagadalli
ainūraravattaidukōṭi indra-candrādityaru vēdapuruṣaru
munīndraru dēvarkaḷiharu nōḍā
ainūraravattaidukōṭi rudra-brahma-nārāyaṇariharu nōḍā
apramāṇakūḍalasaṅgamadēvā.