Index   ವಚನ - 127    Search  
 
ಅಂಥ ಬ್ರಹ್ಮಾಂಡವ ಇಪ್ಪತ್ತಾರುಲಕ್ಷದ ಮೇಲೆ ಸಾವಿರದಿನ್ನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಿವಾಹವೆಂಬ ಭುವನ. ಆ ಭುವನದೊಳು ಶತಪಿಂಡನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಆರುನೂರಿಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಆರುನೂರಿಪ್ಪತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.