Index   ವಚನ - 133    Search  
 
ಅಂಥ ಬ್ರಹ್ಮಾಂಡವ ಮೂವತ್ತೆರಡುಲಕ್ಷದ ಮೇಲೆ ಸಾವಿರದ ಮುನ್ನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಶಂಭುವೆಂಬ ಭುವನ. ಆ ಭುವನದೊಳು ಸ್ವಯಂಭುವೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಆರುನೂರೈವತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಆರುನೂರೈವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.