ಅಂಥ ಬ್ರಹ್ಮಾಂಡವ ಮೂವತ್ತು ಮೂರುಲಕ್ಷದ ಮೇಲೆ
ಸಾವಿರದ ಮುನ್ನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ದೌಷ್ಟ್ರಿಯೆಂಬ ಭುವನ.
ಆ ಭುವನದೊಳು ಶಂಭುವೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರರವತ್ತು ಕೋಟಿ ಇಂದ್ರ-ಬ್ರಹ್ಮ-ನಾರಾಯಣರಿಹರು.
ಆರುನೂರರವತ್ತು ಕೋಟಿ ರುದ್ರರು ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.