Index   ವಚನ - 143    Search  
 
ಅಂಥ ಬ್ರಹ್ಮಾಂಡವ ನಾಲ್ವತ್ತೆರಡುಲಕ್ಷದ ಮೇಲೆ ಸಾವಿರದ ನಾನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಬಲಿಪ್ರಿಯವೆಂಬ ಭುವನ. ಆ ಭುವನದೊಳು ಶಂಭುವೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಏಳುನೂರೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.