Index   ವಚನ - 149    Search  
 
ಅಂಥ ಬ್ರಹ್ಮಾಂಡವ ನಾಲವತ್ತೆಂಟುಲಕ್ಷದ ಮೇಲೆ ಸಾವಿರದಾ ನಾನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಜ್ಞಾನಭೂತವೆಂಬ ಭುವನ. ಆ ಭುವನದೊಳು ಜ್ಞಾನಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳನೂರ ಮೂವತ್ತೈದುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು. ಏಳುನೂರ ಮೂವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.