Index   ವಚನ - 165    Search  
 
ಅಂಥ ಬ್ರಹ್ಮಾಂಡವ ಅರುವತ್ನಾಲ್ಕುಲಕ್ಷದ ಮೇಲೆ ಸಾವಿರದಾ ಆರುನೂರಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕ್ಷಯಾಂತಕವೆಂಬ ಭುವನ. ಆ ಭುವನದೊಳು ಶೂಲಪಾಣಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ಹದಿನೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ. ಎಂಟುನೂರಾ ಹದಿನೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.