Index   ವಚನ - 170    Search  
 
ಅಂಥ ಬ್ರಹ್ಮಾಂಡವ ಅರುವತ್ತೊಂಬತ್ತು ಲಕ್ಷದ ಮೇಲೆ ಸಾವಿರದಾರುನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಶೀಘ್ರವೆಂಬ ಭುವನ. ಆ ಭುವನದೊಳು ಪ್ರಳಯಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ನಲವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಎಂಟುನೂರಾ ನಲವತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.