ಅಂಥ ಬ್ರಹ್ಮಾಂಡವ ಎಪ್ಪತ್ನಾಲ್ಕು ಲಕ್ಷದ ಮೇಲೆ
ಸಾವಿರದೇಳುನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜಯವೆಂಬ ಭುವನ.
ಆ ಭುವನದೊಳು ಮೃತ್ಯುಂಜಯನೆಂಬ
ಮಹಾಕಾಲರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಅರುವತ್ತೈದುಕೋಟಿ
ನಾರಾಯಣ-ಬ್ರಹ್ಮ-ರುದ್ರ-ಇಂದ್ರಾದಿಗಳಿಹರು ನೋಡಾ.
ಎಂಟುನೂರಾ ಅರವತ್ತೈದುಕೋಟಿ ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava eppatnālku lakṣada mēle
sāviradēḷunūrā mūvatteṇṭu
brahmāṇḍavanoḷakoṇḍudondu jayavemba bhuvana.
Ā bhuvanadoḷu mr̥tyun̄jayanemba
mahākālarudramūrti ihanu.
Ā rudramūrtiya ōlagadalli
eṇṭunūrā aruvattaidukōṭi
nārāyaṇa-brahma-rudra-indrādigaḷiharu nōḍā.
Eṇṭunūrā aravattaidukōṭi vēdapuruṣaru
munīndraru candrādityaru dēvarkaḷiharu nōḍā
apramāṇakūḍalasaṅgamadēvā.