ಅಂಥ ಬ್ರಹ್ಮಾಂಡವ ತೊಂಬತ್ತು ಲಕ್ಷದ ಮೇಲೆ
ಸಾವಿರದ ಎಂಟುನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಧರ್ಮವೆಂಬ ಭುವನ.
ಆ ಭುವನದೊಳು ಧರ್ಮಸ್ವರೂಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತು ನೂರಾ ನಾಲ್ವತ್ತೈದು ಕೋಟಿ ದೇವರ್ಕಳು ವೇದಪುರುಷರು
ಇಂದ್ರಚಂದ್ರಾದಿತ್ಯರು ಇಹರು ನೋಡಾ.
ಒಂಬತ್ತು ನೂರಾ ನಾಲ್ವತ್ತೈದು ಕೋಟಿ
ರುದ್ರ ಬ್ರಹ್ಮ ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.