Index   ವಚನ - 202    Search  
 
ಅಂಥ ಬ್ರಹ್ಮಾಂಡವ ಎರಡುಕೋಟಿಯ ಮೇಲೆ ಎರಡುಸಾವಿರದಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಜ್ವಲನವೆಂಬ ಭುವನ. ಆ ಭುವನದೊಳು ಜ್ವಲತ್ಕಾಲಾನಲಾಭಾಸನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಸಾವಿರಕೋಟಿಯ ಮೇಲೆ ಹತ್ತುಕೋಟಿ ಇಂದ್ರ ನಾರಾಯಣ ಬ್ರಹ್ಮ ರುದ್ರಾದಿಗಳಿಹರು. ಸಾವಿರಕೋಟಿಯ ಮೇಲೆ ಹತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.