ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ
ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ,
ಅಂಗ-ಪ್ರತ್ಯಂಗ-ಸ್ವರೂಪ ಸ್ವಭಾವಗಳೆಂತೆಂದಡೆ:
ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ,
ಮಹಾಘನವಾಗಿಹ ಪ್ರಣವವೆ
ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ.
ದಿವ್ಯಾನಂದಪ್ರಣವ ದಿವ್ಯಜ್ಞಾನ ಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಪುರ್ಬು.
ಅಚಲಾತೀತ ಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ.
ಸಹಜ ನಿರಾಲಂಬಪ್ರಣವವೆ
ಆ ಅಖಂಡ ಮೂಲಸ್ವಾಮಿಯ ನಾಸಿಕ ನೋಡಾ.
ನಿರಾಲಂಬಾತೀತ ಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಂಗಳು ನೋಡಾ.
ನಿರಾಮಯಪ್ರಣವ ನಿರಾಮಯಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ.
ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ.
ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಗಡ್ಡ ಮೀಸೆ ಕೋರೆದಾಡೆ ನೋಡಾ.
ನಾದ ಬಿಂದು ಕಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ತಾಳೋಷ್ಠಸಂಪುಟ ನೋಡಾ.
ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ,
ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ,
ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ
ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ,
ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ,
ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ,
ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ
ಆ ಅಖಂಡ ಮಹಾಮೂಲಸ್ವಾಮಿಯ ಷೋಡಶದಂತಂಗಳು ನೋಡಾ.
ಕುಳವಿಲ್ಲದ ನಿರಾಕುಳಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಕೊರಳು.
ಅಪ್ರಮಾಣ ಅಗೋಚರಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ.
ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ,
ಶಿವಜ್ಯೋತಿಪ್ರಣವ,ಅಚಲಪ್ರಣವ, ಅಚಲಾನಂದಪ್ರಣವಂಗಳೆ
ಆ ಅಖಂಡ ಮಹಾಮೂಲಸ್ವಾಮಿಯ ಹಸ್ತಾಂಗುಲಿ ನಖಂಗಳು ನೋಡಾ.
ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಎದೆ.
ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ.
ನಿರುಪಮಪ್ರಣವ, ನಿರುಪಮಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ದಕ್ಷಿಣ ವಾಮ ಪಾರ್ಶ್ವಂಗಳು.
ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನು.
ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ
ಬೆನ್ನಿನೆಲುವು ನೋಡಾ.
ಪಂಚಸಂಜ್ಞೆಯನುಳ್ಳ ಅಖಂಡಗೋಳಕಾರಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಗರ್ಭ ನೋಡಾ.
ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ
ಪ್ರಕಾಶವಾಗಿಹುದು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು,
ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು,
ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ
ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು,
ಅನೇಕಕೋಟಿ ಆದಿಪಾಶಂಗಳೆಂಬ
ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು,
ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್ಪದ,
ಅನೇಕಕೋಟಿ ಅನಾದಿ ತ್ವಂಪದ,
ಅನೇಕಕೋಟಿ ಅನಾದಿ ಅಸಿಪದಂಗಳೆಂಬ
ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್ಪದ,
ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ
ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಂಗಳು,
ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ
ವೇದಾಂತ ಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು,
ಅನೇಕಕೋಟಿ ಅನಾದಿ ಈಶ್ವರರು,
ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು,
ಅನೇಕಕೋಟಿ ಅನಾದಿ ಈಶ್ವರರು,
ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು,
ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು,
ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು,
ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು
ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು,
ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು,
ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು
ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು,
ಅನೇಕಕೋಟಿ ದೇವರ್ಕಳು, ಅನೇಕಕೋಟಿ
ಆದಿದೇವರ್ಕಳಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಂಗಳು,
ಅನೇಕಕೋಟಿ ಮಹಾಬ್ರಹ್ಮಾಂಡಂಗಳು,
ಅನೇಕಕೋಟಿ ಆದಿಮಹಾಬ್ರಹ್ಮಾಂಡಂಗಳು ಅಡಗಿಹವು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ನಡುವೇ
ವ್ಯೋಮಾತೀತಪ್ರಣವವು.
ಆ ಅಖಂಡ ಮಹಾಮೂಲಸ್ವಾಮಿಯ ಕಟಿಸ್ಥಾನವೇ
ಚಿತ್ಕಲಾತೀತಪ್ರಣವ.
ಆ ಅಖಂಡ ಮಹಾಮೂಲಸ್ವಾಮಿಯ ಪಚ್ಚಳವೇ
ಅನಾದಿಪ್ರಣವ ಆದಿಪ್ರಣವ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ಉಪಸ್ಥವೇ
ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ
ಮೊದಲಾದ ಅನೇಕಕೋಟಿ ದೇವರ್ಕಳಿಗೂ
ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ.
ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಒಳದೊಡೆ ನೋಡಾ.
ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಒಳಪಾದ ಕಂಭಂಗಳು ನೋಡಾ.
ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಹರಡು ನೋಡಾ.
ಓಂಕಾರಪ್ರಣವ ಮಹದೋಂಕಾರಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ.
ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ
ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ
ಪ್ರಣವದತ್ತತ್ತ ಸ್ಥಾನಂಗಳೇ
ಆ ಅಖಂಡ ಮಹಾಮೂಲಸ್ವಾಮಿಯ ಪದಾಂಗುಲಿಗಳು ನೋಡಾ.
ಆ ಓಂಕಾರಪ್ರಣವದ ಮಹದೋಂಕಾರಪ್ರಣವದ
ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ
ಪಾದಾಂಗುಷ್ಠಾಂಗುಲಿಗಳು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ಸರವೇ ಪರಾತೀತಪ್ರಣವ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ಮಾತೇ
ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ
ಅತಿಮಹಾಜ್ಯೋತಿಪ್ರಣವ ನೋಡಾ.
ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ವಪೆ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯಲ್ಲಿ
ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ
ಆ ನಿರಾಳಸ್ವಯಂಭುಲಿಂಗಂಗಳೇ
ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ.
ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ.
ಆನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ādimūla anādimūlagaḷigattattavāda
mahāmūlasvāmiya mīrida atīta mūlasvāmigattattavāgiha
ā akhaṇḍa mūlasvāmiya rūpu, lāvaṇya, saundarya,
aṅga-pratyaṅga-svarūpa svabhāvagaḷentendaḍe:
Sahaja nirālambavāgiha, mahāghanakke ghanavaha,
mahāghanavāgiha praṇavave
akhaṇḍamūlasvāmiya śiras'su nōḍā.
Divyānandapraṇava divyajñāna praṇavave
ā akhaṇḍa mahāmūlasvāmiya purbu.
Acalātīta praṇavave
ā akhaṇḍa mūlasvāmiya haṇe nōḍā.
Sahaja nirālambapraṇavave
ā akhaṇḍa mūlasvāmiya nāsika nōḍā.
Nirālambātīta praṇavave
ā akhaṇḍa mūlasvāmiya uśvāsa-niśvāsaṅgaḷu nōḍā.
Nirāmayapraṇava nirāmayātītapraṇavave
ā akhaṇḍa mahāmūlasvāmiya karṇa.
Nirvayalapraṇava nirvayalātītapraṇavave
ā akhaṇḍa mahāmūlasvāmiya galla nōḍā.
Amalapraṇava amalānandapraṇava amalātītapraṇavave
ā akhaṇḍa mahāmūlasvāmiya gaḍḍa mīse kōredāḍe nōḍā.
Nāda bindu kalātītapraṇavave
ā akhaṇḍa mahāmūlasvāmiya tāḷōṣṭhasampuṭa nōḍā.
Sahajapraṇava, sahajānandapraṇava, sahajajyōtipraṇava,
anantapraṇava, ānandapraṇava, ānandajyōtipraṇava,
Akhaṇḍapraṇava, akhaṇḍa jyōtipraṇava, akhaṇḍānanda
mahājyōtipraṇava, citpraṇava, cidānandajyōtipraṇava,
cidvyōmapraṇava, nityanijānandapraṇava,
saccidānandapraṇava, nityanirākārapraṇava,
sakala niḥkalātītapraṇavavemba ṣōḍaśapraṇavaṅgaḷe
ā akhaṇḍa mahāmūlasvāmiya ṣōḍaśadantaṅgaḷu nōḍā.
Kuḷavillada nirākuḷapraṇavave
ā akhaṇḍa mahāmūlasvāmiya koraḷu.
Apramāṇa agōcarapraṇavave
ā akhaṇḍa mahāmūlasvāmiya bhujaṅgaḷu nōḍā.
Paramapraṇava, paramānandapraṇava, śivapraṇava,
śivajyōtipraṇava,acalapraṇava, acalānandapraṇavaṅgaḷe
ā akhaṇḍa mahāmūlasvāmiya hastāṅguli nakhaṅgaḷu nōḍā.
Parabrahmapraṇavave ā akhaṇḍa mahāmūlasvāmiya ede.
Niran̄jana jyōtipraṇava niran̄janānandavembapraṇavave
ā akhaṇḍa mūlasvāmiya saṇṇa kucagaḷu nōḍā.
Nirupamapraṇava, nirupamātītapraṇavave
ā akhaṇḍa mahāmūlasvāmiya dakṣiṇa vāma pārśvaṅgaḷu.
Anirvācyapraṇavave ā akhaṇḍa mahāmūlasvāmiya bennu.
Mahadānandapraṇavave ā akhaṇḍa mahāmūlasvāmiya
bennineluvu nōḍā.
Pan̄casan̄jñeyanuḷḷa akhaṇḍagōḷakārapraṇavave
ā akhaṇḍa mahāmūlasvāmiya garbha nōḍā.
Ā garbha anantakōṭi mahāsūryacandrāgni
prakāśavāgihudu nōḍā.
Ā garbhadalli anēkakōṭi praṇavaṅgaḷu, anēkakōṭi tatvaṅgaḷu,
anēkakōṭi akṣaraṅgaḷaḍagihavu nōḍā.
Ā garbhadalli anēkakōṭi anādipatigaḷu,
anēkakōṭi anādipaśugaḷu, anēkakōṭi anādipāśaṅgaḷemba
anādisid'dhānta jñānatrayaṅgaḷaḍagihavu nōḍā.
Ā garbhadalli anēkakōṭi ādipatigaḷu, anēkakōṭi ādipaśugaḷu,
anēkakōṭi ādipāśaṅgaḷemba
ādisid'dhānta jñānatrayaṅgaḷaḍagihavu nōḍā.
Ā garbhadalli anēkakōṭi patigaḷu, anēkakōṭi paśugaḷu,
Anēkakōṭi pāśaṅgaḷemba sid'dhānta jñānatrayaṅgaḷaḍagihavu nōḍā.
Ā garbhadalli anēkakōṭi anādi tatpada,
anēkakōṭi anādi tvampada,
anēkakōṭi anādi asipadaṅgaḷemba
anādi vēdāntapadatrayaṅgaḷaḍagihavu nōḍā.
Ā garbhadalli anēkakōṭi ādi tatpada,
anēkakōṭi ādi tvampada, anēkakōṭi ādi asipadaṅgaḷemba
ādi vēdāntapadatrayaṅgaḷaḍagihavu nōḍā.
Ā garbhadalli anēkakōṭi tvampadaṅgaḷu,
Anēkakōṭi tatpadaṅgaḷu, anēkakōṭi asipadaṅgaḷemba
vēdānta padatrayaṅgaḷaḍagihavu nōḍā.
Ā garbhadalli anēkakōṭi anādi sadāśivaru,
anēkakōṭi anādi īśvararu,
anēkakōṭi anādi māhēśvararu aḍagiharu nōḍā.
Ā garbhadalli anēkakōṭi anādisadāśivaru,
anēkakōṭi anādi īśvararu,
anēkakōṭi māhēśvararu aḍagiharu nōḍā.
Ā garbhadalli anēkakōṭi sadāśivaru, anēkakōṭi īśvararu,
anēkakōṭi māhēśvararu aḍagiharu nōḍā.
Ā garbhadalli anēkakōṭi brahmaru, anēkakōṭi ādibrahmaru,
anēkakōṭi nārāyaṇaru, anēkakōṭi ādinārāyaṇaru,
anēkakōṭi rudraru, anēkakōṭi ādirudraru
aḍagiharu nōḍā.
Ā garbhadalli anēkakōṭi r̥ṣigaḷu, anēkakōṭi ādi'r̥ṣigaḷu,
anēkakōṭi bhānu, anēkakōṭi ādibhānu,
anēkakōṭi candraru, anēkakōṭi ādicandraru
aḍagiharu nōḍā.
Ā garbhadalli anēkakōṭi indraru, anēkakōṭi ādimahēndraru,
anēkakōṭi dēvarkaḷu, anēkakōṭi
ādidēvarkaḷaḍagiharu nōḍā.
Ā garbhadalli anēkakōṭi brahmāṇḍaṅgaḷu,
anēkakōṭi mahābrahmāṇḍaṅgaḷu,
anēkakōṭi ādimahābrahmāṇḍaṅgaḷu aḍagihavu nōḍā.
Ā akhaṇḍa mahāmūlasvāmiya naḍuvē
vyōmātītapraṇavavu.
Ā akhaṇḍa mahāmūlasvāmiya kaṭisthānavē
citkalātītapraṇava.
Ā akhaṇḍa mahāmūlasvāmiya paccaḷavē
anādipraṇava ādipraṇava nōḍā.
Ā akhaṇḍa mahāmūlasvāmiya upasthavē
anēkakōṭi brahma-viṣṇu-rudra-īśvara-sadāśiva
modalāda anēkakōṭi dēvarkaḷigū
jananasthalavāgiha nirvāṇapraṇava nōḍā.
Kalānandapraṇava brahmānandapraṇavavē
ā akhaṇḍa mahāmūlasvāmiya oḷadoḍe nōḍā.
Cijjyōtipraṇava, paran̄jyōtipraṇavavē
ā akhaṇḍa mahāmūlasvāmiya oḷapāda kambhaṅgaḷu nōḍā.
Niśśabdapraṇava, niśśabdānandapraṇavavē
ā akhaṇḍa mahāmūlasvāmiya haraḍu nōḍā.
Ōṅkārapraṇava mahadōṅkārapraṇavavē
ā akhaṇḍa mahāmūlasvāmiya pādaṅgaḷu nōḍā.
Ā ōṅkāra praṇavada tārakasvarūpa daṇḍakasvarūpa
kuṇḍalākāra ardhacandraka darpaṇākāra jyōtisvarūpavemba
praṇavadattatta sthānaṅgaḷē
ā akhaṇḍa mahāmūlasvāmiya padāṅguligaḷu nōḍā.
Ā ōṅkārapraṇavada mahadōṅkārapraṇavada
mahāprakāśavē ā akhaṇḍa mahāmūlasvāmiya
pādāṅguṣṭhāṅguligaḷu nōḍā.
Ā akhaṇḍa mahāmūlasvāmiya saravē parātītapraṇava nōḍā.
Ā akhaṇḍa mahāmūlasvāmiya mātē
mahājyōti praṇavakattattavāgiha
atimahājyōtipraṇava nōḍā.
Śūn'ya-niḥśūn'ya ā mahāśūn'yakattattavāda mahadānandapraṇavavē
ā akhaṇḍa mahāmūlasvāmiya vape nōḍā.
Ā akhaṇḍa mahāmūlasvāmiyalli
anantakōṭi nirāḷasvayambhuliṅga aḍagihavāgi
ā nirāḷasvayambhuliṅgaṅgaḷē
sthānadalli dharisiha bhūṣaṇaṅgaḷu nōḍā.
Jñānapraṇavavē ā akhaṇḍa mahāmūlasvāmiya turubu nōḍā.
Ānantakōṭi praṇavaṅgaḷanoḷakoṇḍ'̔iha mahābhūtapraṇavavē
ā akhaṇḍa mahāmūlasvāmiya śr̥ṅgāra nōḍā
apramāṇakūḍalasaṅgamadēvā.