ಆ ಅಖಂಡ ಮಹಾಮೂಲಸ್ವಾಮಿಯ ಸ್ಥಲದ
ವಚನವೆಂತೆಂದೊಡೆ:
ನಿರಂಜನಾತೀತಪ್ರಣವ, ಅವಾಚ್ಯಪ್ರಣವ,
ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ
ಶಿವಪ್ರಣವ, ಶಕ್ತಿಪ್ರಣವ, ಶಿವಶಕ್ತಿರಹಿತವಾಗಿಹ ಮಹಾಪ್ರಣವ
ಮೊದಲಾದ ಅನಂತಕೋಟಿ ಪ್ರಣವಂಗಳಿಲ್ಲದಂದು,
ಚಿತ್ಪ್ರಕಾಶ ಚಿದಾಕಾಶ ಮಹದಾಕಾಶ
ಮಹಾಕಾಶ ಶಿವಾಕಾಶ ಬಿಂದ್ವಾಕಾಶ
ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ
ಅನಂತಕೋಟಿ ಮಹಾಪ್ರಣವಾಕಾಶ,
ಅತಿಪ್ರಣವಾಕಾಶ ಅತಿಮಹಾತೀತಪ್ರಣವಾಕಾಶಗಳಿಲ್ಲದಂದು,
ಆದಿ ಅನಾದಿ ಸಂಗತ ಅನಂತ ಅರ್ಭಕ
ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ
ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ
ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ
ದ್ವಾಪರಯುಗ ಕಲಿಯುಗಂಗಳೆಂಬ
ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಯುಗಂಗಳು
ಅತಿಮಹಾಯುಗಂಗಳು,
ಅತಿಮಹಾತೀತಮಹಾಯುಗಂಗಳಿಲ್ಲದಂದು,
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ
ಅಖಂಡ ಮಹಾಮೂಲಸ್ವಾಮಿಯು ಇದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣ ಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍa mahāmūlasvāmiya sthalada
vacanaventendoḍe:
Niran̄janātītapraṇava, avācyapraṇava,
kalāpraṇava, anādipraṇava, ādipraṇava
śivapraṇava, śaktipraṇava, śivaśaktirahitavāgiha mahāpraṇava
modalāda anantakōṭi praṇavaṅgaḷilladandu,
citprakāśa cidākāśa mahadākāśa
mahākāśa śivākāśa bindvākāśa
nādākāśa kalākāśa praṇavākāśa modalāgi
anantakōṭi mahāpraṇavākāśa,
atipraṇavākāśa atimahātītapraṇavākāśagaḷilladandu,
Ādi anādi saṅgata ananta arbhaka
tamandha tāraja taṇḍaja bhinnaja bhinnāyukta
avyakta amadāyukta maṇiraṇa mān'yaraṇa
viśvāraṇa viśvāvasu alaṅkr̥ta kr̥tayuga trētāyuga
dvāparayuga kaliyugaṅgaḷemba
ippattondu yuga modalāgi anantakōṭi yugaṅgaḷu
atimahāyugaṅgaḷu,
atimahātītamahāyugaṅgaḷilladandu,
ādimūla anādimūlaṅgaḷigattattavāda
mahāmūlasvāmiya mīrida atimahāmūlasvāmigattattavāgiha
akhaṇḍa mahāmūlasvāmiyu iddanayya illadante
nam'ma apramāṇa kūḍalasaṅgamadēvā.