Index   ವಚನ - 298    Search  
 
ಮಣಿಪೂರಕಚಕ್ರದ ದಶದಳ ಪದ್ಮವ ಪೊಕ್ಕು ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಕೃಷ್ಣವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಧೋಮುಖದಾಗಿಹ ಕುಂಡಲಿಯ ಸರ್ಪನ ಬಾಲವಂ ಮೆಟ್ಟಿ ಊರ್ಧ್ವಮುಖವಂ ಮಾಡಿ, ಪಶ್ಚಿಮವಾಯು ತಿರುಗಿ ಅನಿಲಾಗ್ನಿಯ ದೆಸೆಯಿಂದ ಗ್ರಂಥಿಗಳು ಕರಗಿ ಮನಪವನಬಿಂದು ಸಂಯೋಗದಿಂದೇಕಾಗ್ರ ಚಿತ್ತದಿಂ ಅನಾಹತಚಕ್ರದ ದ್ವಾದಶದಳದ ಪದ್ಮವ ಹೊಕ್ಕನು ಅಪ್ರಮಾಣಕೂಡಲಸಂಗಮದೇವಾ.