Index   ವಚನ - 305    Search  
 
ಎನ್ನ ದೇಹವೆಂಬ ಪ್ರಾಕಾರದೊಳು ಮನವೆಂಬ ಶಿವಾಲಯ ನೋಡಾ. ಮನವೆಂಬ ಶಿವಾಲಯದೊಳು ಚಿದ್ರೂಪವೆಂಬ ಸಿಂಹಾಸನ ನೋಡಾ. ಚಿದ್ರೂಪವೆಂಬ ಸಿಂಹಾಸನದ ಮೇಲೆ ಚಿತ್ಪ್ರಕಾಶವೆಂಬ ಲಿಂಗವ ನೆಲೆಗೊಳಿಸಿ ನಿಶ್ಚಿಂತವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸಲು ಭವಮಾಲೆ ಹಿಂಗಿ ಭವರಹಿತನಾದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.