Index   ವಚನ - 314    Search  
 
ಇಂತೀ ನಾನಾ ಮುಖದಲ್ಲಿ ಸ್ತೋತ್ರವ ಮಾಡಿ ಅಳುವ ಶಿಷ್ಯನಂ ಕಂಡು ಆ ಸದ್ಗುರುಸ್ವಾಮಿ ಆ ಶಿಷ್ಯನ ಹಣೆಯ ಹಿಡಿದೆತ್ತಿ ಕಂಬನಿಯಂ ತೊಡದು ಅಂಜದಿರು ಅಂಜದಿರು ನಿನ್ನ ಭವರೋಗಂಗಳಂ ಮಾಣಿಸುವೆನೆಂದು ಅಭಯಹಸ್ತವಂ ಕೊಟ್ಟು ಸಂತೈಸಿ ತಮ್ಮ ಕರುಣಪ್ರಸಾದವನಿತ್ತು ಸಲಹಿದನಯ್ಯ ಅಪ್ರಮಾಣಕೂಡಲಸಂಗಮದೇವಾ.