Index   ವಚನ - 316    Search  
 
ನಾದ ಬಿಂದುವ ನುಂಗಿ ಉಗುಳದಂತಿದ್ದುದು. ಬಿಂದುವ ಕಲೆ ನುಂಗಿ ಉಗುಳದಂತಿದ್ದುದು. ಕಲೆಯ ಕಲಾತೀತ ನುಂಗಿ ಉಗುಳದಂತಿದ್ದುದು. ಕಲಾತೀತವ ಬಯಲು ನುಂಗಿ ಉಗುಳದಂತಿದ್ದುದು. ಬಯಲ ನಿರ್ವಯಲು ನುಂಗಿ ಉಗುಳದಂತಿದ್ದುದು. ನಿರ್ವಯಲ ನಿರಾಕಾರ ನುಂಗಿ ಉಗುಳದಂತಿದ್ದುದು. ನಿರಾಕಾರವ ನಿರುಪಮ ನುಂಗಿ ಉಗುಳದಂತಿದ್ದುದು. ನಿರುಪಮವ ನಿರಾಳ ನುಂಗಿ ಉಗುಳದಂತಿದ್ದುದು. ನಿರಾಳವ ಸಹಜ ನುಂಗಿ ಉಗುಳದಂತಿದ್ದುದು ನೋಡಾ ಅಪ್ರಮಾಣಕೂಡಲಸಂಗಮದೇವಾ ನಿಮ್ಮ ಶರಣಸಂಬಂಧ.