Index   ವಚನ - 348    Search  
 
ಉಪ್ಪು ಉದಕವ ಬೆರೆಸಿದಂತೆ ವಾರಿಕಲ್ಲು ವಾರಿಯ ಬೆರಸಿದಂತೆ ಕರ್ಪೂರ ಅಗ್ನಿಯ ಬೆರಸಿದಂತೆ ಮನ ಲಿಂಗದಲ್ಲಿ ಲೀಯವಾಗಿಹುದೆ ಭಾವಲಿಂಗದ ಪೂಜೆ. ಇದಕ್ಕೆ ಈಶ್ವರೋsವಾಚ: ಮನೋಲಯ ನಿರಂಜನ್ಯಂ ಭಾವಲಿಂಗಸ್ಯ ಪೂಜನಂ | ಯತ್ತೇ ಲಿಂಗಾರ್ಚನಂ ಜ್ಞಾದ್ವಿಶೇಷಂ ಶ್ರುಣು ಪಾರ್ವತಿ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.