Index   ವಚನ - 349    Search  
 
ಇನ್ನು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಾರ್ಪಿತದ ವಿವರವೆಂತೆಂದಡೆ: ಇಷ್ಟಲಿಂಗಕ್ಕೆ ತನ್ನ ಶರೀರವ ಸಮರ್ಪಿಸುವುದು, ಪ್ರಾಣಲಿಂಗಕ್ಕೆ ತನ್ನ ಮನವ ಸಮರ್ಪಿಸುವುದು, ಭಾವಲಿಂಗಕ್ಕೆ ತನ್ನ ಪರಿಣಾಮವ ಸಮರ್ಪಿಸುವುದು. ಇದಕ್ಕೆ ಈಶ್ವರೋsವಾಚ: ``ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಃ | ಭಾವಲಿಂಗಾರ್ಪಿತಂ ತೃಪ್ತಿಃ ಇತಿ ಭೇದಂ ವರಾನನೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.