Index   ವಚನ - 369    Search  
 
ಲಿಂಗವೇ ಪತಿಯಾಗಿ, ತಾನು ಸತಿಯೆಂಬ ಭಾವದಲ್ಲಿ ಆಚರಿಸಿ, ಪಂಚೇಂದ್ರಿಯಸುಖಂಗಳ ಬಯಸದಿಹುದೀಗ ಶರಣಸ್ಥಲ ನೋಡಾ. ಇದಕ್ಕೆ ಶ್ರೀ ಮಹಾದೇವೋsವಾಚ: ಪತಿರ್ಲಿಂಗಂ ಸತಿರ್ಭಾವಾಮಿತಿ ಯುಕ್ತಂ ಸದಾ ತಥಾ | ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.