Index   ವಚನ - 381    Search  
 
ನಿರಂಜನ ಪ್ರಣವದ ನೆನಹುಮಾತ್ರದಿಂದ ಅವಾಚ್ಯ ಪ್ರಣವದುತ್ಪತ್ಯವಾಯಿತ್ತು. ಇನ್ನು ಅವಾಚ್ಯ ಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ: ಸತ್ಯಂ ಜ್ಞಾನಮನಂತಂ ಬ್ರಹ್ಮ ಏಕಮೇವ ನ ದ್ವಿತೀಯಂ ಬ್ರಹ್ಮಂ'' ಎಂಬ ಪರಬ್ರಹ್ಮವಿಲ್ಲದಂದು, ಏಕಏವೋ ರುದ್ರೋ ಮಹೇಶ್ವರಃ'' ಎಂಬ ಮಹೇಶ್ವರತತ್ತ್ವವಿಲ್ಲದಂದು, ವಿಶ್ವರೂಪರುದ್ರ ವಿಶ್ವಾಧಿಕಮಹಾರುದ್ರರಿಲ್ಲದಂದು, ಕೋಟಿ ಶತಕೋಟಿ ಸಾವಿರ ಜಡೆಮುಡಿ ಗಂಗೆ ಗೌರಿಯರಿಲ್ಲದಂದು, ಕೋಟಾನುಕೋಟಿ ಕಾಲರುದ್ರರಿಲ್ಲದಂದು, ಅಸಂಖ್ಯಾತ ಪ್ರಳಯ ಕಾಲರುದ್ರರಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.