ಸಪ್ತಕೋಟಿ ಮಹಾಮಂತ್ರ ವಿಶಾಲವಾಗದಂದು,
ತೊಂಬತ್ತುನಾಲ್ಕು ಪದ ವಿಶಾಲವಾಗದಂದು,
ವರ್ಣ ಐವತ್ತೆರಡು ವಿಶಾಲವಾಗದಂದು,
ಇನ್ನೂರಾ ಇಪ್ಪತ್ತುನಾಲ್ಕು ಭುವನ ವಿಶಾಲವಾಗದಂದು,
ತೊಂಬತ್ತಾರುತತ್ತ್ವ ವಿಶಾಲವಾಗದಂದು,
ಅರುವತ್ತುನಾಲ್ಕು ಕಲೆಜ್ಞಾನ ವಿಶಾಲವಾಗದಂದು,
ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವನು.
Art
Manuscript
Music
Courtesy:
Transliteration
Saptakōṭi mahāmantra viśālavāgadandu,
tombattunālku pada viśālavāgadandu,
varṇa aivatteraḍu viśālavāgadandu,
innūrā ippattunālku bhuvana viśālavāgadandu,
tombattārutattva viśālavāgadandu,
aruvattunālku kalejñāna viśālavāgadandu,
ōṅkāravemba anādipraṇavavāgiddanu nōḍā illadante
nam'ma apramāṇakūḍalasaṅgamadēvanu.