Index   ವಚನ - 402    Search  
 
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪದ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ. ಅಕಾರವೆ ಶಿವನು, ಉಕಾರವೆ ಶಕ್ತಿ , ಮಕಾರವೆ ಪರವು. ಅಕಾರವೆ ನಾದ, ಉಕಾರವೆ ಬಿಂದು, ಮಕಾರವೆ ಕಲೆ. ಈ ಆರು ನಾಮಂಗಳು ನಿಃಕಲತತ್ತ್ವ. ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ ಬಿಂದು ಕಲೆ ಯುಕ್ತವಾಗಿ ಅಖಂಡಲಿಂಗವಾಯಿತ್ತು. ಅದಕ್ಕೆ ಕರಚರಣ ಅವಯವಂಗಳಿಲ್ಲ; ಅಖಂಡಸ್ವರೂಪು. ಇದಕ್ಕೆ ಚಿತ್ಪಿಂಡಾಗಮೇ: ಓಂಕಾರಂ ತಾರಕಾರೂಪಂ ಅಕಾರಂ ಸೋsಜಾಯತ | ಓಂಕಾರ ಕುಂಡಲಾಕಾರೇ ಉಕಾರಂ ಚಾತ್ರ ಜಾಯತೇ || ಓಂಕಾರ ಜ್ಯೋತಿರೂಪೇ ಚ ಮಕಾರಂ ಚಾಪಿ ಜಾಯತೇ | ಇತಿ ತ್ರ್ಯಕ್ಷರಂ ದೇವಿ ಸ್ಥಾನಸ್ಥಾನೇಷು ಜಾಯತೇ || ಅಕಾರೇಚ ಉಕಾರೇಚ ಮಕಾರೇಚಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ | ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಮಧ್ಯೇ ವೇದಲಿಂಗ ಸಮುದ್ಭವಂ | ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ: ಅಕಾರೋಕಾರ ಸಂಯೋಗಾತ್ತನ್ಮಧ್ಯೇ ಲಿಂಗರೂಪಕಂ | ಅವ್ಯಕ್ತಲಿಂಗಮಾಕಲ್ಯ ಗೋಳಕಾಕಾರಸಂಜ್ಞಕಃ || ನಾದೋ ಲಿಂಗಮಿತಿ ಜ್ಞೇಯಂ ಬಿಂದುಪೀಠಮುದಾಹೃತಂ | ನಾದಬಿಂದುಯುತಂ ರೂಪಂ ಜಗಸ್ಸೃಷ್ಟ್ಯರ್ಥಕಾರಣಂ || ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿಸ್ತಸ್ಯ ಪೀಠಿಕಾ | ಆಲಯಂ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇವಂ ಲಿಂಗಮಿತ್ಯುಕ್ತಂ ಲಿಂಗತತ್ತ್ವಪರಾಯಣೈಃ || ಲಿಂಗಂ ಶಂಭುರಿತಿಜ್ಞೇಯಂ ಪೀಠಂ ಶಕ್ತಿರುದಾಹೃತಂ | ಶಿವಶಕ್ತಿಸಮಾಯೋಗಂ ಸೃಷ್ಟಿಸ್ಥಿತಿ ಲಯಾವಹಂ || ಲಿಂಗೇನ ಜಾಯತೇ ತತ್ರ ಜಗತ್‍ಸ್ಥಾವರ ಜಂಗಮಂ | ತಸ್ಮಾಲ್ಲಿಂಗಮಶೇಷೇಣ ಲಿಂಗರೂಪಮುದಾಹೃತಂ || ಅಸಂಖ್ಯಾತ ಮಹಾವಿಷ್ಣುಃ ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಸುರೇಂದ್ರಾಣಾಂ ಲೀಯತೇ ಸರ್ವದೇವತಾಃ || ಅಸಂಖ್ಯಾತ ದೇವಮುನಯೋ ಗಮ್ಯತೇ ಸರ್ವದೇವತಾಃ | ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇವ ಲಿಂಗಮಿತ್ಯಾಹುಃ ಲಿಂಗತತ್ತ್ವ ಪರಾಯಣಾಃ ||'' ಇಂತೆಂದುದಾಗಿ, ಇದಕ್ಕೆ ಪ್ರಣವಾನಂದ ಸೂಕ್ತೇ: ಆದಿಯೋಂಕಾರಪೀಠಂಚ ಅಕಾರಂ ಕಂಠರುಚ್ಯತೇ | ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ || ನಾಳಂ ಬಿಂದು ಮಹಾತೇಜ ನಾದಮಖಂಡಲಿಂಗಯೋಃ | ಆದಿಮಧ್ಯಾಂತರಹಿತಂ ಅಪ್ರಮೇಯಮನಾಮಯಂ || ಅಸಂಖ್ಯ ಸೂರ್ಯಚಂದ್ರಾಗ್ನಿಃ ಅಸಂಖ್ಯಾತತಟಿತ್ಪ್ರಭಂ | ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಂ ಅಗೋಚರಂ || ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.