ಇನ್ನು ಆ ಪ್ರಣವದ ತತ್ಸ್ಥಾನವೆಂತೆಂದಡೆ:
ಪ್ರಥಮ ತಾರಕಸ್ವರೂಪವಾಗಿಹುದು.
ಎರಡನೆಯದು ದಂಡಸ್ವರೂಪವಾಗಿಹುದು.
ಮೂರನೆಯದು ಕುಂಡಲಾಕಾರವಾಗಿಹುದು.
ನಾಲ್ಕನೆಯದು ಅರ್ಧಚಂದ್ರಾಕಾರವಾಗಿಹುದು.
ಐದನೆಯದು ದರ್ಪಣಾಕಾರವಾಗಿಹುದು.
ಆರನೆಯದು ಜ್ಯೋತಿಸ್ವರೂಪವಾಗಿಹುದು ನೋಡಾ.
ಇದಕ್ಕೆ ಈಶ್ವರೋsವಾಚ:
ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ |
ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠ ಜ್ಯೋತಿಸ್ವರೂಪಕಂ |
ಇತಿ ಪ್ರಣವ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ
Art
Manuscript
Music
Courtesy:
Transliteration
Innu ā praṇavada tatsthānaventendaḍe:
Prathama tārakasvarūpavāgihudu.
Eraḍaneyadu daṇḍasvarūpavāgihudu.
Mūraneyadu kuṇḍalākāravāgihudu.
Nālkaneyadu ardhacandrākāravāgihudu.
Aidaneyadu darpaṇākāravāgihudu.
Āraneyadu jyōtisvarūpavāgihudu nōḍā.
Idakke īśvarōsvāca:
Prathamaṁ tārakārūpaṁ dvitīyaṁ daṇḍa ucyatē |
tr̥tīyaṁ kuṇḍalākāraṁ caturthaṁ cārdhacandrakaṁ ||
pan̄camaṁ darpaṇākāraṁ ṣaṣṭha jyōtisvarūpakaṁ |
iti praṇava vijñēyaṁ ētadgōpyaṁ varānanē ||''
intendudāgi,
apramāṇakūḍalasaṅgamadēvā