Index   ವಚನ - 467    Search  
 
ವಿಶುದ್ಧಿಚಕ್ರದಲ್ಲಿಹ ಪ್ರಸಾದಲಿಂಗವು ಪರಂಜ್ಯೋತಿಸ್ವರೂಪವಾಗಿ ನಿತ್ಯವಾಗಿ ಪರಿಪೂರ್ಣವಾಗಿ ಇಂದ್ರಿಯಾರ್ಥಂಗಳೆಂಬ ವಿಷಯಂಗಳು ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ವಿಷಯಂಗಳನು ಮೀರಿ ವರ್ತಿಸುವುದಾಗಿ, ಜ್ಞಾನದಿಂದ ಹಡೆಯಲುಪಟ್ಟಂಥಾ ಮೋಕ್ಷಸ್ವರೂಪವಾಗಿ ಪರಿಣಾಮಪ್ರಪಂಚಕ್ಕೆ ಕಾರಣವಾದ ಸಾಧನವೆಂಬ ನಾಮವನುಳ್ಳ ತತ್ವವನು ಪತಿಯೆಂಬ ತನ್ನ ಶಕ್ತಿಯಿಂದ ಉದಯಿಸಿದುದಾಗಿ ನಾಮರೂಪಾದಿಗಳಿಲ್ಲದಂಥಾ ಪ್ರಸಾದವೆಂಬ ಮಹಾಲಿಂಗವಾಗಿ ಹೇಳುತ್ತಿಹರು ನೋಡಾ. ಇದಕ್ಕೆ ಮಹಾವಾತುಲಾಗಮೇ: ವೃತ್ತ- ಜ್ಯೋತಿಂ ಪರಂ ನಿಜಮಖಂಡಮತೀಂದ್ರಿಯಾರ್ಥಂ ಜ್ಞಾನೋಪಲಬ್ಧಮಮೃತಂ ಪರಿಣಾಮಬೀಜಂ | ಸಾದಾಖ್ಯತತ್ವಮುದಿತಂ ಪರಯಾ ಸ್ವಶಕ್ತ್ಯಾ ಪ್ರಾಹುಃ ಪ್ರಸಾದಘನಲಿಂಗಮುಪಾಧಿಹೀನಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.