Index   ವಚನ - 468    Search  
 
ಆಜ್ಞಾಚಕ್ರದಲ್ಲಿಯ ಮಹಾಲಿಂಗವು ಜನ್ಮ ಜರಾ ಮರಣಂಗಳಿಲ್ಲದುದಾಗಿ, ನಿರ್ಮಲವಾಗಿ, ಸರ್ವವ್ಯಾಪ್ತಿಯಾಗಿ, ಅದ್ವಿತೀಯವಾಗಿ, ಅಣುವಿಗೆ ಅಣುವಾಗಿ, ಪರಾಪರವಾಗಿ, ಸಂಸಾರವ್ಯಾಪ್ತಿಯಿಲ್ಲದುದಾಗಿ, ಹವಣಿಸಲು ಬಾರದುದಾಗಿ, ಭಾವವಂದರಿಂದವೆ ಅರಿಯಲು ಬಹುದಾಗಿ, ಚೈತನ್ಯಸ್ವರೂಪವಾಗಿ, ಶಿವತತ್ವವನು ಚಿತ್ತೆಂಬ ಶಕ್ತಿಯ ಸ್ಫುರಣವೆ ರೂಪಾಗಿಯುಳ್ಳ ಮಹಾಲಿಂಗವಾಗಿ ಹೇಳುತ್ತಿಹರು ನೋಡಾ. ಇದಕ್ಕೆ ಮಹಾವಾತುಲಾಗಮೇ: ವೃತ್ತ- ಆದ್ಯಂತಶೂನ್ಯಮಮಲಂ ಪರಿಪೂರ್ಣಮೇಕಂ ಸೂಕ್ಷ್ಮಂ ಪರಾಪರಮನಾಮಯಮಪ್ರಮೇಯಂ | ಭಾವೈಕಗಮ್ಯ ಜಡಂ ಶಿವತತ್ವಮಾಹುಃ ಚಿಚ್ಛಕ್ತಿ ಸಂಸ್ಫುರಣರೂಢಮಹಾತ್ಮಲಿಂಗಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.