Index   ವಚನ - 484    Search  
 
ಇನ್ನು ಷಡ್ವಿಧಭಕ್ತಿಯ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಸದ್ಭಕ್ತಿ ಇಹುದು. ಸ್ವಾಧಿಷ್ಠಾನಚಕ್ರದಲ್ಲಿ ನೈಷ್ಠಿಕಾಭಕ್ತಿ ಇಹುದು. ಮಣಿಪೂರಕಚಕ್ರದಲ್ಲಿ ಅವಧಾನಭಕ್ತಿ ಇಹುದು. ವಿಶುದ್ಧಿಚಕ್ರದಲ್ಲಿ ಆನಂದಭಕ್ತಿ ಇಹುದು. ಆಜ್ಞಾಚಕ್ರದಲ್ಲಿ ಸಮರಸಭಕ್ತಿ ಇಹುದು ನೋಡಾ. ಇದಕ್ಕೆ ಚಕ್ರಾತೀತಾಗಮೇ: ಆಧಾರೇ ಭೃತ್ಯಭಕ್ತಿಶ್ಚ ಸ್ವಾಧಿಷ್ಠೇ ನೈಷ್ಠಿಕಂ ತಥಾ | ಅವಧಾನ ತಥಾ ಪೂರೇ ಅನುಭಾವಂಚಾನಾಹತೇ || ಆನಂದಾಶ್ಚ ವಿಶುದ್ಧಿಶ್ಚ ಆಜ್ಞೇ ಸಮರಸಂ ಭವೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.