Index   ವಚನ - 507    Search  
 
ಇನ್ನೊಂದು ಪ್ರಕಾರದ ಹಸ್ತ ಉತ್ಪತ್ಯವದೆಂತೆಂದಡೆ: ಏನೂ ಏನೂ ಎನಲಿಲ್ಲದ ಪರಬ್ರಹ್ಮದಲ್ಲಿ ಭಾವಹಸ್ತ ಹುಟ್ಟಿತ್ತು. ಆ ಭಾವಹಸ್ತದಲ್ಲಿ ಜ್ಞಾನಹಸ್ತ ಹುಟ್ಟಿತ್ತು. ಆ ಜ್ಞಾನಹಸ್ತದಲ್ಲಿ ಸುಮನಹಸ್ತ ಹುಟ್ಟಿತ್ತು. ಆ ಸುಮನಹಸ್ತದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು. ಆ ನಿರಹಂಕಾರಹಸ್ತದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು. ಆ ಸುಬುದ್ಧಿಹಸ್ತದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ. ಇದಕ್ಕೆ ಈಶ್ವರೋsವಾಚ: ವಸ್ತುನೋಭಾವಮುತ್ಪನ್ನಂ ಭಾವಾತ್ ಜ್ಞಾನಂ ಸಮುದ್ಭವಂ | ಜ್ಞಾನಾಚ್ಚ ಮನಉತ್ಪನ್ನಂ ಮನಸೋsಹಂಕೃತಿಸ್ತ್ರಥಾ || ಅಹಂಕಾರಾತ್ತತೊ ಬುದ್ಧಿಃ ಬುದ್ಧ್ಯಾ ಚಿತ್ತಂ ಸಮುದ್ಭವಂ | ಏಶೈಕಂತು ಸಮುತ್ಪನ್ನಂ ಸೂಕ್ಷ್ಮಂ ಸೂಕ್ಷ್ಮಂ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.