ಇನ್ನೊಂದು ಪ್ರಕಾರದ ಷಡ್ಲಿಂಗನ್ಯಾಸಸ್ಥಲವೆಂತೆಂದಡೆ:
ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿ
ಆಚಾರಲಿಂಗ ನ್ಯಾಸವಾಗಿಹುದು.
ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿ
ಗುರುಲಿಂಗ ನ್ಯಾಸವಾಗಿಹುದು.
ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿ
ಶಿವಲಿಂಗ ನ್ಯಾಸವಾಗಿಹುದು.
ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿ
ಚರಲಿಂಗ ನ್ಯಾಸವಾಗಿಹುದು.
ವ್ಯೋಮಾಂಗವಾದ ಶರಣನ ಸುಜ್ಞಾನಹಸ್ತದಲ್ಲಿ
ಪ್ರಸಾದಲಿಂಗ ನ್ಯಾಸವಾಗಿಹುದು.
ಆತ್ಮಾಂಗವಾದ ಐಕ್ಯನ ಭಾವಹಸ್ತದಲ್ಲಿ
ಮಹಾಲಿಂಗ ನ್ಯಾಸವಾಗಿಹುದು ನೋಡಾ.
ಇದಕ್ಕೆ ಈಶ್ವರೋsವಾಚ:
ಆಚಾರಂ ಚಿತ್ತಹಸ್ತಂ ಚ ಬುದ್ಧಿಹಸ್ತೇ ಗುರುಸ್ತಥಾ |
ಶಿವಲಿಂಗಂ ಚ ಅಹಂಕಾರೇ ಚರಲಿಂಗ ಮನೇ ತಥಾ ||
ಪ್ರಸಾದಂ ಜ್ಞಾನಹಸ್ತೇ ಚ ಭಾವಹಸ್ತೇ ಮಹಸ್ತಥಾ |
ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಚ ವರಾನನೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innondu prakārada ṣaḍliṅgan'yāsasthalaventendaḍe:
Pr̥thviyē aṅgavāda bhaktana sucittahastadalli
ācāraliṅga n'yāsavāgihudu.
Appuve aṅgavāda mahēśvarana subud'dhihastadalli
guruliṅga n'yāsavāgihudu.
Analāṅgavāda prasādiya nirahaṅkārahastadalli
śivaliṅga n'yāsavāgihudu.
Vāyuvē aṅgavāda prāṇaliṅgiya sumanavemba hastadalli
caraliṅga n'yāsavāgihudu.
Vyōmāṅgavāda śaraṇana sujñānahastadalli
Prasādaliṅga n'yāsavāgihudu.
Ātmāṅgavāda aikyana bhāvahastadalli
mahāliṅga n'yāsavāgihudu nōḍā.
Idakke īśvarōsvāca:
Ācāraṁ cittahastaṁ ca bud'dhihastē gurustathā |
śivaliṅgaṁ ca ahaṅkārē caraliṅga manē tathā ||
prasādaṁ jñānahastē ca bhāvahastē mahastathā |
iti liṅgasthalaṁ jñātuṁ durlabhaṁ ca varānanē ||''
intendudāgi, apramāṇakūḍalasaṅgamadēvā.