Index   ವಚನ - 519    Search  
 
ಆ ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣಮದ ಜ್ಯೋತಿಸ್ವರೂಪದಲ್ಲಿ ಮನಸ್ಸು ಪುಟ್ಟಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಶ್ರೋತ್ರ ಪುಟ್ಟಿತ್ತು. ಆ ಪ್ರಣವದ ಅರ್ಧಚಂದ್ರದಲ್ಲಿ ತ್ವಕ್ಕು ಪುಟ್ಟಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ನೇತ್ರ ಪುಟ್ಟಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಜಿಹ್ವೆ ಪುಟ್ಟಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಘ್ರಾಣ ಪುಟ್ಟಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ: ಓಂಕಾರ ಜ್ಯೋತಿರೂಪೇ ಚ ಮಾನಸಂ ಚ ಸಮುದ್ಭವಂ | ಓಂಕಾರ ದರ್ಪಣಾಕಾರೇ ಶ್ರೋತ್ರಂ ಚೈವ ಸಮುದ್ಭವಂ || ಓಂಕಾರರಾರ್ಧಚಂದ್ರೇ ಚ ತ್ವಕ್ ಚೈವ ಸಮುದ್ಭವಂ | ಓಂಕಾರ ಕುಂಡಲಾಕಾರೇ ನೇತ್ರಂ ಚೈವ ಸಮುದ್ಭವಂ || ಓಂಕಾರ ದಂಡಕರೂಪೇ ಚ ಜಿಹ್ವಾ ಚೈವ ಸಮುದ್ಭವಂ | ಓಂಕಾರ ತಾರಕರೂಪೇ ಘ್ರಾಣಂ ಚೈವ ಸಮುದ್ಭವಂ | ಇತಿ ಷಷ್ಠಮುಖಂ ದೇವಿ ಸ್ಥಾನಸ್ಥಾನೇಷು ಜಾಯತೇ || ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.