Index   ವಚನ - 536    Search  
 
ಆ ಮಾಹೇಶ್ವರನಲ್ಲಿಯ ಭಕ್ತಂಗೆ ಅಪ್ಪುವಿನಲ್ಲಿಯ ಪೃಥ್ವಿಯೇ ಅಂಗ. ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಸುಚಿತ್ತವೇ ಹಸ್ತ. ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಆಚಾರಲಿಂಗವೇ ಲಿಂಗ, ಆ ಆಚಾರಲಿಂಗಮುಖದಲ್ಲಿ ಮಧುರವಾದ ದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.