ಇನ್ನು ಪ್ರಸಾದಿಯ ಷಡ್ವಿಧ ಷಡುಸ್ಥಲಲಿಂಗ
ಮಿಶ್ರಾರ್ಪಣದ ಭೇದವೆಂತೆಂದಡೆ:
ಅಗ್ನಿಯೆ ಅಂಗವಾದ ಪ್ರಸಾದಿಗೆ
ನಿರಹಂಕಾರವೆಂಬ ಹಸ್ತದಲ್ಲಿ
ಶಿವಲಿಂಗಕ್ಕೆ ನೇತ್ರವೆಂಬಮುಖದಲ್ಲಿ
ಹರಿತವರ್ಣವಾದ ರೂಪದ್ರವ್ಯವನು ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu prasādiya ṣaḍvidha ṣaḍusthalaliṅga
miśrārpaṇada bhēdaventendaḍe:
Agniye aṅgavāda prasādige
nirahaṅkāravemba hastadalli
śivaliṅgakke nētravembamukhadalli
haritavarṇavāda rūpadravyavanu samarpaṇavaṁ māḍi
tr̥ptiyane bhōgisuvanu nōḍā
apramāṇakūḍalasaṅgamadēvā.