Index   ವಚನ - 546    Search  
 
ಆ ಪ್ರಸಾದಿಯಲ್ಲಿಯ ಐಕ್ಯಂಗೆ ಅಗ್ನಿಯಲ್ಲಿಯ ಆತ್ಮವೇ ಅಂಗ. ಆ ಅಂಗಕ್ಕೆ ನಿರಹಂಕಾರದಲ್ಲಿಯ ಭಾವವೇ ಹಸ್ತ. ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಮಹಾಲಿಂಗವೆ ಲಿಂಗ. ಆ ಮಹಾಲಿಂಗಮುಖದಲ್ಲಿ ಈ ಎಲ್ಲಾ ರೂಪದ್ರವ್ಯಂಗಳನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.