Index   ವಚನ - 547    Search  
 
ಇನ್ನು ಪ್ರಾಣಲಿಂಗಿಯಲ್ಲಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣದ ಭೇದವೆಂತೆಂದಡೆ: ವಾಯುವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆಂಬ ಹಸ್ತದಲ್ಲಿ ಜಂಗಮಲಿಂಗದಲ್ಲಿ ತ್ವಕ್ಕೆಂಬ ಮುಖದಲ್ಲಿ ಶೈತ್ಯವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.