ಇನ್ನು ಹೃದಯಂಗದಲ್ಲಿ ಮಹಾಲಿಂಗ ಸ್ವಾಯತವಾಗಿಹುದು.
ಶ್ರೋತ್ರಾಂಗದಲ್ಲಿ ಪ್ರಸಾದಲಿಂಗ ಸ್ವಾಯತವಾಗಿಹುದು.
ತ್ವಗಾಂಗದಲ್ಲಿ ಚರಲಿಂಗದ ಸ್ವಾಯತವಾಗಿಹುದು.
ದೃಗಾಂಗದಲ್ಲಿ ಶಿವಲಿಂಗ ಸ್ವಾಯತವಾಗಿಹುದು.
ಜಿಹ್ವಾಂಗದಲ್ಲಿ ಗುರುಲಿಂಗ ಸ್ವಾಯತವಾಗಿಹುದು.
ಘ್ರಾಣಾಂಗದಲ್ಲಿ ಆಚಾರಲಿಂಗ ಸ್ವಾಯತವಾಗಿಹುದು ನೋಡಾ.
ಇದಕ್ಕೆ ವಾತುಲಾಗಮೇ:
ಹೃದಯಾಂಗೇ ಮಹಾಲಿಂಗಂ ಶ್ರೋತ್ರಾಂಗೇತಿ ಪ್ರಸಾದಕಂ |
ತ್ವಗಂಗೇ ಚರಲಿಂಗಂ ಚ ದೃಗಂಗೇ ಶಿವಲಿಂಗಕಂ ||
ಜಿಹ್ವಾಂಗೇ ಗುರುಲಿಂಗಂತು ನಾಶಿಕಾಂಗೇ ತಥೈವ ಚ |
ಆಚಾರಲಿಂಗಮಾಶ್ರಾಂತಂ ಸುಪ್ರತಿಷ್ಠಿತಮೇವ ಹಿ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu hr̥dayaṅgadalli mahāliṅga svāyatavāgihudu.
Śrōtrāṅgadalli prasādaliṅga svāyatavāgihudu.
Tvagāṅgadalli caraliṅgada svāyatavāgihudu.
Dr̥gāṅgadalli śivaliṅga svāyatavāgihudu.
Jihvāṅgadalli guruliṅga svāyatavāgihudu.
Ghrāṇāṅgadalli ācāraliṅga svāyatavāgihudu nōḍā.
Idakke vātulāgamē:
Hr̥dayāṅgē mahāliṅgaṁ śrōtrāṅgēti prasādakaṁ |
tvagaṅgē caraliṅgaṁ ca dr̥gaṅgē śivaliṅgakaṁ ||
jihvāṅgē guruliṅgantu nāśikāṅgē tathaiva ca |
ācāraliṅgamāśrāntaṁ supratiṣṭhitamēva hi ||''
intendudāgi, apramāṇakūḍalasaṅgamadēvā.